ಸೀತಾ ರಾಮಂ ಚಲನಚಿತ್ರದ ವಿಶ್ಲೇಷಣೆ
#SitaRamamReview with Soumya MJ ಒಂದು ಒಳ್ಳೆಯ ಸಿನಿಮಾ ಹೇಗಿರಬೇಕು ಎಂಬುದಕ್ಕೆ ತೆಲುಗಿನ ಸೀತಾರಾಮಮ್ ಉತ್ತರವಾಗಿದೆ. ನಾನು ವೀಕ್ಷಿಸಿದ್ದು ಈ ಚಲನಚಿತ್ರದ ಮಲಯಾಳಂ ಅವತರಣಿಕೆ. ಪ್ರತಿಭಾವಂತ ಹಾಗೂ ಹೆಸರಾಂತ ಕಲಾವಿದರಾದ ದಿಲ್ಕುರ್ ಸಲ್ಮಾನ್ ನಾಯಕನಟನಾಗಿ ಅಭಿನಯಿಸಿರುವ ಈ ಚಿತ್ರಕ್ಕೆ ಮೃಣಾಲ್ ಠಾಕುರ್ ನಾಯಕಿ. ಪೋಷಕಪಾತ್ರಗಳಲ್ಲಿ ಚಿತ್ರಕ್ಕೆ ಜೀವವಿತ್ತವರು ಸುಮಂತ್, ವೆನ್ನೆಲ ಕಿಶೋರ್, ಸಚಿನ್ ಖೇಡೇಕರ್, ಪ್ರಕಾಶ್ ರಾಜ್ ಮುಂತಾದವರು. ಇಡಿಯ ಚಿತ್ರದ ನಿರೂಪಣೆ ಹಾಗೂ ಗತಿನಿರ್ಣಯದ ಎರಡುಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದವರು ರಶ್ಮಿಕಾ ಮಂದಣ್ಣ ಹಾಗೂ ತರುಣ್ ಭಾಸ್ಕರ್. ಕಥೆ 1984ರದ್ದು; ಹೂರಣ 1964ರದ್ದು. ಇಪ್ಪತ್ತು ವರ್ಷಗಳ ಹಿಂದೆ ರಾಮ ಎನ್ನುವವನೊಬ್ಬ ತನ್ನ ಪತ್ನಿ ಸೀತಾಮಹಾಲಕ್ಷ್ಮಿಗೆ ಬರೆದ ಒಂದು ಪತ್ರವನ್ನು ತಲುಪಿಸವ ಇರಾದೆಯಿಂದ ಭಾರತಕ್ಕೆ ಬಂದ ಕಟ್ಟರ್ ಮುಸ್ಲಿಂ ಹುಡುಗಿಯೊಬ್ಬಳು ಭಾರತದ ಅಂತಃಸತ್ವವಾದ ಸೀತಾರಾಮರ ಆದರ್ಶಗಳನ್ನು ಅರಿತುಕೊಂಡು ಮನಃಪರಿವರ್ತನೆಯನ್ನು ಹೊಂದುವುದೇ ಈ ಚಿತ್ರದ ಕಥೆ. ಆಕೆಯ ಈ ಯಾತ್ರೆಯೇ ಈ ಸಿನಿಮಾ. ಒಂದರ ಹಿಂದೆ ಒಂದರಂತೆ 1984 ಮತ್ತು 1964ರ ಕಾಲಘಟ್ಟದ ಫಟನಾವಳಿಗಳನ್ನು ಪೋಣಿಸಿಕೊಂಡು ಹೋಗುವ ಈ ಸಿನಿಮಾ ಒಟ್ಟು ಎರಡೂವರೆ ಗಂಟೆಗಳದ್ದು. ಆದರೆ, ಒಂದಿನಿತೂ ಬೇಸರ ಮತ್ತು ಔದಾಸೀನ್ಯ ತರಿಸದೆ, ಒಬ್ಬ ಧೈರ್ಯಸ್ಥೆ ನಾಯಕಿಯ, ಒಬ್ಬ ದೇಶದ್ರೋಹಿಯ, ಶತ್ರುರಾಷ್ಟ್ರದ ಒಬ್ಬನೇ ಸಹೃದಯಿ