ಗೆಳೆಯ ವಿನೀತ್ ಕಳಿಸಿದ ಸಾಲುಗಳು...
ಮರ ಸತ್ತು ಎಷ್ಟೋ ಕಾಲವಾಗಿತ್ತು, ಆದರೆ ಅದನ್ನು ಹಬ್ಬಿದ ಬಳ್ಳಿ ಇನ್ನೂ ಆ ಮರವನ್ನು ಬಿಟ್ಟಿರಲಾರದೇ ಬಿಗಿಯಾಗಿ ತಬ್ಬಿಕೊಂಡಿತ್ತು. ಮರ ಕಡಿಯಲೆಂದು ಹೋದ ನಾನು ಅದನ್ನು ಅಲ್ಲೇ ಕೈಬಿಟ್ಟೆ. ಅಮರ ಪ್ರೇಮಿಗಳು ಹಾಗೇ ಇರಲಿ ಎಂದು.
ಮರದಿಂದ ಜಾರಿದ ಪ್ರತಿ ಶಿಥಿಲ ಪರ್ಣವೂ ಹಳೆಯ ಕಥೆಯಲ್ಲ, ಬರಿಯ ವ್ಯಥೆಯಲ್ಲ, ಹೊಸ ಚಿಗುರಿಗೆ ದಾರಿ ಮಾಡಿಕೊಡುವ ಪ್ರಯತ್ನ.
ಬಾಡಿಹೋಗಿದ್ದ ಹೋವಿನ ಮಡಿಲಿನಲ್ಲಿ ಮುತ್ತಿನಂತಹ ಮಕರಂದಗಳಿದ್ದವು.. ಆದರೆ ಅದು ಅಲ್ಲೇ ಕುಳಿತು ರೋಧಿಸುತ್ತಿದ್ದ ದುಂಬಿಯ ಕಣ್ಣಿನ ಹನಿಗಳಾಗಿದ್ದವು...
ಯೋಚಿಸಿದರೆ ಹೆಚ್ಹೆಚ್ಚು ಅರ್ಥ ಕಟ್ಟಿಕೊಡುವ ಸಾಲುಗಳು...!! ಭಾವಿಸಬೇಕು ಅಷ್ಟೇ...!!
Comments