GOKARNA :):)

"ನೀವಿಂದು ಮಾಡಿದ ಪೂಜೆಯಿಂದ ಮಠದ ಎಲ್ಲ ಪೂರ್ವಾಚಾರ್ಯರುಗಳಿಗೆ ತ್ರುಪ್ತಿಯಾಗಿರಬಹುದು" - ಎಂದು ವ್ಯಾಸ ಪೀಠದಿಂದ ಗುರುಗಳು ನುಡಿದಾಗ ಮೈಯಲ್ಲಿ ವಿದ್ಯುತ್ ಸಂಚಾರ. ವರ್ಣನೆ ಮಾಡಲು ಮಾತು - ಶಬ್ದ ಇಲ್ಲವಾಗಿದೆ.
೧೪೬೪೧ ರುದ್ರಪಠಣ ಎಂದು ನಿರ್ಧಾರ ಆಗಿದ್ದಿದ್ದದ್ದು ೨೨೩೬೫ ಆದಾಗ, ಮುಕ್ಕಾಲು ಗಂಟೆಯಲ್ಲಿ ಕೋಟಿ ತುಳಸೀ ಅರ್ಚನೆ - ಒಂದೂವರೆ ಗಂಟೆಯಲ್ಲಿ ಕೋಟಿ ಕುಂಕುಮಾರ್ಚನೆ ಆಗುವಾಗ ಮೈ-ಮನ-ಕಣ್ಣು ತುಂಬಿದ್ದು ಸುಳ್ಳಲ್ಲ.

ರಾಮಕಥೆ ಕೇಳುತ್ತಾ ರಾಮ ಜನ್ಮವಾದಾಗ ಕಣ್ಣು ತುಂಬಿದ್ದು - "ಇನ್ನೇಕೆ ನಾಚಿಕೆ ? ನರ್ತಿಸಿ, ರಾಮ ಸೀತಾ ಕಲ್ಯಾಣವಾಗಲಿ" ಎಂದು ಗುರುಗಳು ಆದೇಶಿಸಿದಾಗ ಸೇರಿದ ೧೦೦೦೦ಕ್ಕೂ ಹೆಚ್ಚು ಜನ ಮೈಬೆವರುವಂತೆ  ಹುಚ್ಚೆದ್ದು ಕುಣಿದು ಆನಂದಿಸಿದ ಅನುಭವವನ್ನು ಶಬ್ದಗಳಲ್ಲಿ ಕಟ್ಟಿಡಲು ಹೇಗೆ ಸಾಧ್ಯ?

೯೯೯೯ನೆಯ ಪೂಜೆಯನ್ನು ಹತ್ತಿರದಿಂದ ನೋಡಿ  ಸಪರಿವಾರ ಶ್ರೀ ಸೀತಾರಾಮಚಂದ್ರಚಂದ್ರಮೌಳೀಶ್ವರರಾಜರಾಜೇಶ್ವರಿ ದೇವರನ್ನು ಕಣ್ಣುತುಂಬಿಸಿಕೊಂಡದ್ದನ್ನು ಜೇವನದಲ್ಲಿ ಮರೆಯಲು ಸಾಧ್ಯವೇ? ಮರೆಯುವುದು ಸಾಧುವೇ?

ಅಶೋಕೆಯ ಆ ಶೋಕರಹಿತ ಪರಿಸರದಲ್ಲಿ - ಚಿರತೆಗಳು ದಿನದ ಹೊತ್ತೇ ಓಡಾಡುತ್ತಿದ್ದ ಜಾಗದಲ್ಲಿ ಶ್ರೀರಾಮ ಮತ್ತೆ ವಿರಾಜಮಾನನಾಗಿ ದರ್ಶನವಿತ್ತದ್ದು ನಮ್ಮ ನಿಮ್ಮೆಲ್ಲರ ಪುಣ್ಯ. ಗುರುಗಳ ಶ್ರೀಮುಖದಿಂದ ಮಠದ ದೇವರುಗಳಬಗ್ಗೆ, ಪರಂಪರೆಯಬಗ್ಗೆ ತಿಳಿಯುವಂತಾಗುವುದು ಏನು ಸಣ್ಣ ಭಾಗ್ಯವೇ???
ದರ್ಶನವಿತ್ತ ಆತ್ಮಲಿಂಗ, ಮನ ತಂಪಾಗಿಸಿದ ದೇವ ಮಲ್ಲಿಕಾರ್ಜುನ.

ಅಲ್ಲಿ ಏನು ಪಡಕೊಂಡೆವೆಂದು ನಮಗೆ ಈಗಲೇ ತಿಳಿಯದು. ಅಲ್ಲಿ ಬಂದಿದ್ದವರೆಲ್ಲಾ ತಮ್ಮ ಪಾತ್ರೆಯಲ್ಲಿ ಹಿಡಿಸುವಷ್ಟು ತುಂಬಿಸಿಕೊಂಡರು ತಮಗರಿವಿಲ್ಲದಂತೆಯೇ. ಮತ್ತೆ ಪ್ರಾಣಾಶಕ್ತಿಯ ಸಂಚಾರ - ಕುಂಡಲಿನೀಶಕ್ತಿಯ ಜಾಗ್ರುತಿ ಸಾಧಕರ ಗಮನಕ್ಕೆ ಬಂದಿರದೇ ಹೋಗಿರಲಾರದು. The whole surrounding was filled with cosmic Energy, Goodness and Happiness. That place is really Ashoke. ಅನ್ವರ್ಥ ಆ ಹೆಸರು.

ಕಡೀಮೆಯೆಂದರೆ ಮೂವತ್ತು ಸಾವಿರವಾದರೂ ಜನ ಸೇರಿದ್ದರಲ್ಲಿ. ಅಷ್ಟೂ ಜನರಿಗೆ ಊಟದ ವ್ಯವಸ್ಠೆ - ಇರಲು ಜಾಗ - ಪ್ರಯಾಣಾಕ್ಕೆ ಅನುವು ಮಾಡಿಕೊಟ್ಟಿತ್ತು ಮಠ. ತಮ್ಮೆಲ್ಲ ಕೆಲಸಕಾರ್ಯಗಳಿಗೆ ವಿರಾಮವನ್ನಿತ್ತು ಬಂದು ನಿಂತ ಕಾರ್ಯಕರ್ತರಿಗೆ ಎಷ್ಟೆಂದು ಧನ್ಯವಾದ ಹೇಳೋಣ? ಎಷ್ಟೆಂದರೂ ಕಡಿಮೆಯೇ...

ಬಂದವರು ಭಾಗ್ಯವಂತರು, ಯಾಕೆ ಗೊತ್ತೇ? "ನಾವು ನಿಮ್ಮ ತಾಯಿಯಾಗಿದ್ದರೆ, ಇಷ್ಟುಹೊತ್ತು ಕುಳಿತಿದ್ದು ಶ್ರಮಪಟ್ಟ ನಿಮಗೆಲ್ಲ ಏಣ್ಣೆಹಚ್ಚಿ ಸ್ನಾನ ಮಾಡಿಸದೇ ಕಳಿಸುತ್ತಿರಲಿಲ್ಲ " ಎಂದು ಗುರುಗಳೇ ಆಶೀರ್ವದಿಸಿದ್ದರು. "ರಾಮನ ದ್ರುಷ್ಟಿ ಎಂದೆಂದಿಗೂ ನಿಮ್ಮ ಮೇಲಿದೆ - ನಿಮ್ಮ ದ್ರುಷ್ಟಿ ಯಾವತ್ತೂ ರಾಮನ ಮೇಲಿರಲಿ" ಎಂದು ಹರಸಿದರು. ಅದಕ್ಕೇ, ಬಂದವರೆಲ್ಲ ಭಾಗ್ಯವಂತರು.

ನೀವೂ ಬನ್ನಿ, ಮೊನ್ನೆ ಭಾಗವಹಿಸಲಾಗದಿದ್ದರೇನಂತೆ? hareraama.in ನಲ್ಲಿ ಆ ನೆನಪು , ಅನುಭವ ಮತ್ತು ಅದರ ಸವಿ ಇನ್ನೂ ಇದೆ, ಬನ್ನಿ ಸವಿಯೋಣ.
ರುದ್ರ ಪಾರಾಯಣಕ್ಕಾಗಿ ಇಲ್ಲಿ ಒತ್ತಿ
ಕುಂಕುಮಾರ್ಚನೆಗಾಗಿ ಇಲ್ಲಿ ಒತ್ತಿ
ಪೂಜೆಯ ವೀಡಿಯೋಕ್ಕಾಗಿ ಇಲ್ಲಿ ಒತ್ತಿ


Comments

ನಿಮ್ಮ ಸ್ವ೦ತ ಅನುಭವ ಓದಿ ಬಹಳ ಸ೦ತೋಷವಾಯಿತು. ನಾನೇ ಗೋಕರ್ಣದಲ್ಲಿ ಇದ್ದ೦ತೆ ಭಾಸವಾಗುತ್ತಿದೆ. :) ನಿಮ್ಮ ಬ್ಲಾಗು ತು೦ಬಾ ಚೆನ್ನಾಗಿದೆ. ಕೀಪ್ ಇಟ್ ಅಪ್ :)
ಹರೇ ರಾಮ...

ಇ೦ತಿ ನಿಮ್ಮ ಗೆ೦ಟ
Nanda Kishor B said…
ಧನ್ಯವಾದ. ಇನ್ನೂ ಬರುತ್ತಿರಿ, ಮುಂದೆ ಅಲ್ಲಿನ ಕೆಲ ಅಪರೂಪದ ಚಿತ್ರಗಳನ್ನು ಹಾಕಲಿದ್ದೇನೆ.
ನಿಮಗೆ ಇಷ್ಟವಾಗಬಹುದು...
Soumya said…
Thanks for the links. Along with your write-up, they gave me a fair idea of the massive scale of this event.
You know, I have seen Sri Raghaveshwara Bharati perform pooja only once....on a very ordinary day at the Tirthahalli branch of the Matt..It was about 7-8 years ago - a very serene experience.
Nanda Kishor B said…
It was really a great time i had in my life.
Never ever i can forget those 3 days:):):)
and my friends Abhi and kirthi made my journey very easy:):)
i enjoyed everything:):):) at the max i could:):):)
shreekrishna said…
ಅಲ್ಲಿಯ ಅನುಭವ ಅದು ಅನುಭವ ವೇದ್ಯ ಮಾತ್ರ. ಮಾತಿನಲ್ಲಿ ವಣಿಸಲಸಾಧ್ಯ. ನಂದ ಚೆನ್ನಾಗಿ ನಿರೂಪಿಸಿದ್ದಿ. ದನ್ಯವಾದಗಳು
Nanda Kishor B said…
ತುಂಬಾ ತುಂಬಾ ಧನ್ಯವಾದಗಳು...
Nanda Kishor B said…
oh shine:):):)
you commented??? that too in Kannada?
i'm glad...
thanks bro:)
Unknown said…
gokarnakke hogi bandante anisutide .....bahala chennagi baredideeri nimmolage obba sahiti iddane anta spashta vagide .......bhashe ishtavaagide bahaavanegalu aaptavagive....keep it up
vineeth prabhu said…
nivu praktiti yannu eshtu chennegi ishta padutieeri anuvudu iadarinda tiliyuttade adyatmada sparshvide.....mitavaada vedanta militavaagide vayasiggu meeri baredideeri...super keep it up
Nanda Kishor B said…
thank ashu:)
thanks for the comment.. do visit again:):):)
Nanda Kishor B said…
thank you vini...
ಬಹಳ ಚೆನ್ನಾಗಿ ಪ್ರತಿಕ್ರಿಯಿಸಿದಿರಿ .. ಬಹಳ ಖುಶಿಯಾಯ್ತು...
ಇನ್ನೂ ಬರುತ್ತಿರಿ...