aNe prahasana - just for fun

ಹೀಗೊಂದು ನಾಟಕ: ಆಣೆ ಪ್ರಹಸನ 

ರಂಗದ ಬಲಭಾಗದಿಂದ ಬಂದ ಪ್ರಮುಖರೊಬ್ಬರು ಅಲ್ಲೇ ಇದ್ದ ಇನ್ನೋರ್ವ ಪ್ರಮುಖರಿಗೆ ಒಂದು ಸವಾಲು ಹಾಕುತ್ತಾರೆ,
ಬೇರೇನಲ್ಲ,
ನಮ್ಮೂರಿನ ಕಾರಣಿಕ ದೇವಸ್ಠಾನವೊಂದರಲ್ಲಿ ತಮ್ಮ ಸತ್ಯವಂತಿಕೆಯನ್ನು ಪ್ರಮಾಣೀಕರಿಸುವುದಷ್ಟೇ...!
ಆಶ್ಚರ್ಯದ ಸಂಗತಿಯೆಂದರೆ ಆ ಇನ್ನೋರ್ವ ಪ್ರಮುಖರು ಸವಾಲು ಸ್ವೀಕರಿಸಿದ್ದು...! ಅದೇ ನಮ್ಮ ಪ್ರಮುಖರ ಮುಖ ಕಪ್ಪಿಡಲು ಕಾರಣ. ಅಯ್ಯಯ್ಯೋ...! ಕೆಟ್ಟಿತಲ್ಲ ಕೆಲಸ...!! ಎಂದುಕೊಂಡರೇನೋ ಮನದಲ್ಲೇ?

ಇದೇ ತಿಂಗಳ ಒಂದು ಶುಭದಿನ ನಿರ್ಧರಿಸಿ ಅದೇ ದಿನ ಆಣೆ ಮಾಡುವುದೆಂದು ನಿರ್ಧಾರವಾಯಿತು.
ನಾನು ನಾಡಿದ್ದು ಸಮಯಕ್ಕೆ ಸರಿಯಾಗಿ ಬರುವೆ ಎಂದು ಪ್ರತಿಸ್ಪರ್ಧಿ ಹೇಳಿದರೆ - ನಾನು ನಾಳೆ ರಾತ್ರಿಯೇ ಅಲ್ಲಿರುತ್ತೇನೆ ಎಂದರು ಸವಾಲು ಹಾಕಿದ ಸ್ಪರ್ಧಿ.

ಇದನ್ನೆಲ್ಲಾ ನೋಡಿದ ಪ್ರೇಕ್ಷಕ ಪ್ರಭುಗಳು,
ದೇವರು ನಾಳೆ ಬೆಳಗ್ಗಿನ ಪೂಜೆ ಮುಗಿಸಿ ಎದ್ದು ಹೋಗದಿದ್ದರೆ ಸಾಕು ಎಂದು ಮನದಲ್ಲೇ ಬೇಡಿಕೊಳ್ಳುತ್ತಾರೆ.
ಜನರ ಮನದಿಂಗಿತ ಅರಿತ ಮಠಾಧೀಶರುಗಳು, ಸವಾಲು ಹಾಕಿದ ಪ್ರಮುಖರಿಗೆ ಆಣೆ ಮಾಡುವುದು ಬೇಡಬೆಂಬ ಸಲಹೆ ನೀಡುತ್ತಾರೆ.
ರೋಗಿ ಬಯಸಿದ್ದೂ ಹಾಲು ಅನ್ನ ವೈದ್ಯ ಹೇಳಿದ್ದೂ ಹಾಲು ಅನ್ನ ಎಂಬಂತೆ, ಖುಶಿಯಿಂದ ಒಪ್ಪಿಕೊಂಡರು ನಮ್ಮ ಪ್ರಮುಖರು. ಪ್ರತಿಸ್ಪರ್ಧಿಗಳಿಗೂ ಒಮ್ಮೆ ನಿರಾಳವಾಯಿತು ಬೀಸುವ ದೊಣ್ಣೆ ತಪ್ಪಿತಲ್ಲಾ ಎಂದು.

ಅಲ್ಲಿಗೆ ಪ್ರಹಸನ ಅಂತ್ಯಗೊಂಡು, 
ಮಂಗಳದ ಹಾಡು,
ಇನ್ನು ಮುಂದೆ ಮಾತಿಲ್ಲ - ಏನಿದ್ದರೂ ಕೃತಿಯಲ್ಲಿ ಮಾತ್ರ - ಅಭಿವೃಧ್ಧಿಗೆ ಆದ್ಯತೆ
(ಪ್ರತೀ ಬಾರಿಯೂ ಪರೀಕ್ಷೆಯಲ್ಲಿ ನಾಪಾಸಾದಾಗ - ನಾಳೆಯಿಂದ ಖಂಡಿತಾ ಚೆನ್ನಾಗಿ ಓದುತ್ತೇನೆ ಎಂದು ಮಕ್ಕಳು ಹಾಡುವಂತೆ)
ಅದೇ ಮಂಗಳದ ಹಾಡು ಎಂದು ಪ್ರೇಕ್ಷಕರು ಅದಕ್ಕೆ ಕಿವಿಗೊಡದೇ ಎದ್ದರು. ಎಷ್ಟು ತೊಳೆದರೂ ಕರಿನಾಯಿ ಬಿಳಿನಾಯಿ ಆಗದು ಎಂಬಂತೆ. 
ಕನಿಷ್ಠ ಕರತಾಡನವೂ ಮಾಡಲಿಲ್ಲ ( ಪುಣ್ಯ ಕೆರತಾಡನವಾಗಿಲ್ಲ )

( ಈ ನಾಟಕ ಬರೇ ಓದಿ ನಗಲು ಮಾತ್ರ - ಬೇರೇನಕ್ಕೂ ನಾನು ಜವಾಬ್ದಾರನಲ್ಲ - ಅಂತೆಯೇ ಈ ನಾಟಕದ ಪ್ರದರ್ಶನ ಕಳೆದಿದೆ, ಇನ್ನೊಮ್ಮೆ ಏಷ್ಟು ಹಣ ಕೊಟ್ಟರೂ ಪ್ರದರ್ಶನ ನಡೆಯದು, ಟಿಕೇಟು ಸಿಗದು - ನಾಟಕದ ವರದಿಗಾಗಿ ನಿನ್ನೆ ಮೊನ್ನೆ ಪತ್ರಿಕೆಗಳ ಮುಖಪುಟ ಗಮನಿಸಿ. )

Comments

Soumya said…
ನಾಟಕ - ಕರ್ನಾಟಾಕ!