ಬಹೂಪಯೋಗಿ ಹೀರೇ ಕಾಯಿ...!

ಹೀರೇ ಕಾಯಿ ಅಂತೊಂದು ತರಕಾರಿ ಇದೆ, ಅದು ಪಲ್ಯ-ಚಟ್ಣಿ-ಸಾಂಬಾರು ಮಾಡಲು ಉಪಯೋಗಕ್ಕೆ ಬರುತ್ತದೆ, ಎಂದಷ್ಟೇ ತಿಳಿದಿತ್ತು...
ಹೀಗೂ ಉಂಟೆಂದು ಗೊತ್ತಿರಲಿಲ್ಲ...!!
.
.
.
ಅದೇನಾಯಿತೆಂದರೆ,
ಮೊನ್ನೆ ಊರಿನಿಂದ ಬಂದ ದೊಡ್ಡಮ್ಮ ಇದನ್ನು ತಂದಿದ್ದರು...
ಹೀಗಿದೆ :)   

ಬೆಳೆದು ಹಣ್ಣಾದ ಹೀರೆಯು ಒಣಗಿದಾಗ ಹೀಗಾಗುತ್ತದೆ. ಅದರ ಹಸುರು ಬಣ್ಣ-ಹಳದಿಯಾಗಿ-ಸತ್ವ ಪೂರ್ತಿ ಹೋದಮೇಲಿನ ಸ್ಥಿತಿ ಇದು. ಅದರ ನಾರುಗಳು ಪರಸ್ಪರ ಬೆಸೆದುಕೊಂಡಿದ್ದು ಈ ಆಕಾರ ಮತ್ತು ಬಣ್ಣ ಬಂದಿದೆ.
ಬಹಳ ಗಟ್ಟಿಯಿದ್ದು, ಸುಲಭವಾಗಿ ಕೈಯಲ್ಲಿ ಹರಿಯಲು ಬರುವುದಿಲ್ಲ..

ಕೈಗೂ ಹಿತ- ಪಾತ್ರೆಯೂ ಸ್ವಚ್ಛ :)

ವ್ಯರ್ಥವೆಂದು ಬಿಸಾಕಿ ಬಿಡಬೇಕಿಲ್ಲ, ಪಾತ್ರೆ ತಿಕ್ಕಿ ತೊಳೆಯಲು ತುಂಬ ಒಳ್ಳೆಯದಾಗುತ್ತದೆ ಎಂದರು.
ಪ್ಲಾಸ್ತಿಕ್ ಅಥವಾ ಸ್ಪಂಜಿನಿಂದ ಮಾಡಿದಂತಲ್ಲ ಇದು, ಪ್ಲಾಸ್ತಿಕ್ ಗಿಂತ ಹಗುರ ಮತ್ತು ಮೃದು - ಸ್ಪಂಜಿಗಿಂತ ತೂಕ ಮತ್ತು ಗಟ್ಟಿ..
ನೈಸರ್ಗಿಕ Dish wash ಸಾಧನ:)

ಹಸಿ ಹೀರೆ
ನಿಮ್ಮ ಮನೆಯಲ್ಲಿ ಹೀರೆ ಬೆಳೆಯುವ ಅವಕಾಶವಿದ್ದರೆ ಮಾಡಿನೋಡಿ, ಹಸಿ ಹೀರೆಯನ್ನೇ ಹಣ್ಣು ಮಾಡಿದರೆ ಈ ರೀತಿ ಬರುವುದಿಲ್ಲ :( ಹಾಗಾಗಿ ಬೆಳೆದೇ ಆಗಬೇಕು.

ಸುಲಭದಲ್ಲಿ ಬಹಳ ಕಾಲ ಬಾಳಿಕೆ ಬರುವಂಥದ್ದು ಸಿಕ್ಕಿತು.
ಇದನ್ನು ಶೇಖರಿಸಿಯೂ ಇಡಬಹುದಂತೆ. :)

ಹಳ್ಳಿಯಲ್ಲಿ - ಪ್ರಕೃತಿಯಲ್ಲಿ ಎಂಥೆಂತಾ technology ಇರ್ತದೆ ಮಾರ್ರೆ...!
ನಾವು ಪೇಟೆಯಲ್ಲಿ - ಹೊರಗಡೆ ಹುಡುಕ್ತೇವೆ..!
ಸ್ವಲ್ಪ ಒಳಗಡೆ ಆಚೀಚೆ ನೋಡಿದ್ರೆ ಆಯ್ತು.. ಅಲ್ಲೇ ಇರ್ತದೆ. :) :)

Comments

manjunath said…
hange yella visaya ambaga.. adu ninna abbe ya kai ya hange kantanne
manjunath said…
hange yella visaya ambaga.. adu ninna abbe ya kai ya hange kantanne
Soumya said…
ಸ್ವಲ್ಪ ಬೆಳೆದ ಹೀರೆಕಾಯಿಯಿಂದ ದೋಸೆ ಮಾಡಿದ್ದಿದೆ. ಇದು final stageನ ಉಪಯೋಗ.ತಿಳಿಸಿ ಕೊಟ್ಟದಕ್ಕೆ ಧನ್ಯವಾದಗಳು.
Nanda Kishor B said…
ಅಪ್ಪನ್ನೇ...!!
ಅದು ಆನೇ ತೆಗದ್ದು ಫಟ...
Nanda Kishor B said…
@sowmya mam: ಓ ಅದು ದೋಸೆ ಮಾಡಲೂ ಬರುತ್ತದೆಯೇ?
Bhanu said…
NANDA ninagaagi heere kaayi itemgalu:
1.Palya, 2.Gojju, 3.Saaru (kalas), 4.Kodlu, 5.Pachhadi, 6.Payasa 7.Dose 8.baje (Podi)
ottareyaagi heeerekayi bahupayogi tharakaari.
Bhanu said…
NANDA ninagaagi heere kaayi itemgalu:
1.Palya, 2.Gojju, 3.Saaru (kalas), 4.Kodlu, 5.Pachhadi, 6.Payasa 7.Dose 8.baje (Podi)
ottareyaagi heeerekayi bahupayogi tharakaari.
mg said…
ಆನು ಇದರ ಮೊದಲು ಕೂತ್ಕುಂಜಲ್ಲಿ ನೋಡಿದ್ದು. ಪ್ರೈಮರಿಲಿ ಇಪ್ಪಗ. ಅಲ್ಲಿ ಎಂಗ ಮಣ್ಣಿಲಿ ಆಡಿಕ್ಕಿ ಮೀವಲೆ ಹೋಪಗ ದೊಡ್ಡಮ್ಮ ದಾರ್ಲೆ ಸುಗುಡಿಲಿ ತಿಕ್ಕಿ, ಇಲ್ಲದ್ದರೆ ಕೆಸರು ಹೋಗ ಹೇಳಿ ಹೇಳಿಗೊಂಡಿತ್ತಿದ್ದವು. ಕಾಲು ತಿಕ್ಕುಲುದೇ ಲಾಯಿಕ ಆವುತ್ತು. ಎಲ್ಲಾ ಮರೆತು ಹೋಗಿತ್ತು. ಇದರ ನೋಡಿಯಪ್ಪಗ ಎಲ್ಲಾ ನೆನಪ್ಪಾತು....
Nanda Kishor B said…
ಅಪ್ಪು ಭಾವಾ.. ಈ ಸುಗುಡಿಲ್ಲಿ ತಿಕ್ಕಿರೆ ಹೇಂಗಿಪ್ಪ ಮಣ್ಣೂ ಹೋಕಿದಾ :)
ಹಾಂ°..! ಹೇಳಿದಾಂಗೆ, ಇದೂ ಕೂತ್ಕುಂಜಂದಲೇ ಬಂದದು. ;) ಇನ್ನೂ ಮುಗುದ್ದಿಲ್ಲೆ. :)