ಗೋಹತ್ಯೆ ನಿಷೇಧ ಆಗಲಿ -೧

ಹಸುವು ಪ್ರಾಣಿ; ಅದು ಮನುಷ್ಯನ ಮಾತೆ ಹೇಗೆ?

ಅಮ್ಮನೆಂದರೆ, ಜನ್ಮ ಕೊಟ್ಟು ಬದುಕಿಗೆ ಕಾರಣಳಾದವಳು. ಎಲ್ಲರಿಗೂ, ಹೆತ್ತ ತಾಯಿಯು ಅಮ್ಮ. ಅವರಲ್ಲಿ ಭಾವುಕರಿಗೆ - ಊಟ ಕೊಟ್ಟವಳೂ ಅಮ್ಮನೇ, ನಿಂತ ಭೂಮಯಿಯೂ ತಾಯಿಯೇ, ನೆಲೆ ನೀಡಿರುವ ಭಾಷೆಯೂ ತಾಯಿಯೇ, ಪಾಪನಾಶಿನಿಯಾದ ನದಿಯೂ ತಾಯಿಯೇ - ಯಾಕೆಂದರೆ ಬದುಕಿಗೆ ಇವೆಲ್ಲವೂ ಜನ್ಮದಷ್ಟೇ ಅನಿವಾರ್ಯ. ಅದು ಪ್ರಕೃತಿಯ ಮಗನೊಬ್ಬ ಸೃಷ್ಟಿಕರ್ತನ ಮಹತಿಗೆ ಮಣಿಯುವ ರೀತಿ.

ಹಸುವಿನ ವಾಸವಿದ್ದರೆ ಗಾಳಿಯು ಶುದ್ಧವಾಗುತ್ತದೆ. ಹಸುವಿನ ಹಾಲು ಶಿಶುವಿನ ಮಟ್ಟಿಗೆ ತಾಯಿಯ ಹಾಲಿಗೆ ಪರ್ಯಾಯ. ಹಾಲು ಕುಡಿಯದವರು ಯಾರೂ ಇಲ್ಲ - ಹಸಿವಿಗೋ, ರುಚಿಗೋ, ಮದ್ದಿಗೋ - ಸ್ವಸ್ಥ ಬದುಕಿಗೆ ಹಾಲು ಬೇಕು. ಸಂಸ್ಕರಿಸಿದ ಗೋವಿನ ಮೂತ್ರವು ಒಂದು ಅತ್ಯುತ್ತಮ ಔಷಧಿಯೆಂಬುದು ನನ್ನದೇ ಅನುಭವವು. ಗೋಮಯವು ನೇರಳಾತೀತ ಕಿರಣಗಳನ್ನು ತಡೆಯುತ್ತದೆ, ಅಲ್ಲದೆ ಉತ್ತಮ ಗುಣಮಟ್ಟದ ನೈಸರ್ಗಿಕ ಗೊಬ್ಬರವಾಗಿದೆ. ಇಷ್ಟು ಉಪಯುಕ್ತ ಪ್ರಾಣಿಯು ಇನ್ನೊಂದಿಲ್ಲ.
ಮನುಷ್ಯನ ಭಾವನೆಗಳನ್ನು ಗ್ರಹಿಸುವ ಸಾಮರ್ಥ್ಯ ಹೊಂದಿದೆ ಹಸು.
ಹಾಗಿರುವಾಗ ಗೋವು ತಾಯಿಯಲ್ಲವೇನು? ಮನುಷ್ಯರಿಗೇನು, ಗೋವು ಪ್ರಕೃತಿಯ ಸಕಲ ಜೀವಕೋಟಿಗೂ ಮಾತೆಯೇ ಹೌದು.

ಹಸುವನ್ನು ಕೊಂದರೇನು?

ಸೃಷ್ಟಿಯಿರುವುದು ಎಲ್ಲ ಜೀವಿಗಳ ಉನ್ನತಿಗೆ. ಪ್ರಕೃತಿಗೆ ವಿರುದ್ಧವಾಗಿ ನಡೆದರೆ ಯಾವುದೇ ಜೀವಿಯೂ ಶಾಂತಿ ಮತ್ತು ನೆಮ್ಮದಿ ಪಡೆಯಲಾರದು. ಸೃಷ್ಠಿಗೆ ದ್ರೋಹವೆಸಗಿದರೆ ಸೃಷ್ಟಿಕರ್ತನು ಕ್ಷಮಿಸನು. ಅನೇಕ ಜೀವರಾಶಿಗಳು ಜಗತ್ತಿನಿಂದ ಲುಪ್ತವಾಗಲು, ಅವು ಪ್ರಕೃತಿಗೆ ಅನುಗುಣವಾಗಿ ಚಲಿಸದಿದ್ದುದೇ ಕಾರಣ.
ಹಸುವನ್ನು ಕೊಲ್ಲುವುದೆಂದರೆ ಪ್ರಕೃತಿಗೆ ವಿರುದ್ಧವಾಗಿ ಕೆಲಸ ಮಾಡಿದಂತೆ. ಆ ಮಾಂಸವನ್ನು ತಿನ್ನಬಾರದು, ತಿಂದರೆ ರೋಗ ಲಕ್ಷಣಗಳು ಕಟ್ಟಿಟ್ಟ ಬುತ್ತಿ. ಆ ಚರ್ಮವನ್ನು ಉಪಯೋಗಿಸಿದರೆ ಮನಶ್ಶಾಂತಿಯು ನಿಶ್ಚಯವಾಗಿ ಮರೀಚಿಕೆಯೇ.

ನಾವು ಮಾಡಬೇಕಾದ್ದು ಇಷ್ಟೇ,

ಗೋಹತ್ಯಾ ನಿಷೇಧ ಕಾಯ್ದೆ ಬರಲು ಅಭಯಾಕ್ಷರ ಎಂಬ ಅಭಿಯಾನದಲ್ಲಿ ಪಾಲ್ಗೊಳ್ಳೋಣ. ಗೋವಿನ ಉಳಿವಿಗೆ ನಮ್ಮ ಅಭಿಪ್ರಾಯ ವ್ಯಕ್ತಪಡಿಸೋಣ.

--

ಅಕ್ಷರ ದೀಕ್ಷಿತ

Comments